Its a poem in a south Indian language Kannada. A Kannada poem.
I would have translated this but it would loose some essence and emotions.
In summary the poem is about a first date , where she meets him her experiences.



FIrst date

ಬೆಳದಿಂಗಳ ಅಡಿಯಲ್ಲಿ, ನಡೆಯೆ ನಿನ್ನ ಜೊತೆಯಲ್ಲಿ,
ತಣ್ಣನೆಯ ಗಾಳಿ, ಮೇಲೆ ತುಂಬಿದ ಚಂದಿರ, ನಿನ್ನ ಮಂದಹಾಸ
ಎಲ್ಲವು ಸೇರಿ ತಂಪೆರೆದಿತ್ತು

ಕೈ ಚಾಚಿ ಸನ್ನೆಯಲಿ ನೀ ನನ್ನ ಕೈ ಬೇಡಿ,
ಆಗ ನಾ ಕೈ ನೀಡಿ, ನಮ್ಮ ಬೆರಳುಗಳು ಹೆಣೆದು ಆಲಂಗಿಸಲು
ರೋಮಾಂಚನದ ಬಿಸಿಯರಿಗಿತ್ತು

ಸದ್ದಿಲ್ಲದೇ ಕೈ ನುಸುಳಿ ಹೊರತೆಗೆದು
ಕೊಂಚ ದೂರ ಸರಿದು ಸುಮ್ಮನೇ ನಿನ್ನಂದವನು
ನೋಡೆಂದಿತು ಹೆದರಿ ಬೆಚ್ಚಾದ ಮನವು

ಹಿಡಿದ ಕೈ ದೃಢ ಮಾಡಿ , ಆಕರ್ಷಣೆಯ ರಭಸಕ್ಕೆ
ನಿನ್ನ ಮೈಗೊರಗಿ , ಎಣೆಯಿಲ್ಲದ ಪ್ರಣಯಕ್ಕೆ
ಅನುವು ಮಾಡೆಂದಿತ್ತು ಮೋಹ ಮತ್ತೇರಿದ ತನುವು

ಒಮ್ಮೆ ಶಂಖಿಸಿ , ಇನ್ನೊಮ್ಮೆ ಸ್ಪಂದಿಸಿ , ಮುಂದುವರೆಯದೇ,
ಹಿಂದೆ ಎಳೆಯದೇ, ಕೈ ಬೆರಳುಗಳ ಕಸಿ-ಬಿಸಿಗಳನರಿಯದೆ
ಸ್ತಬ್ಧಳಾಗಿ ನಾನಿರುವಾಗ ,
ಕಾಲ ತಾ ನಡೆವುದ ಮರೆತು,
ಭೂಮಿ ತಾ ತಿರುಗುವುದ ತೊರೆದು,
ನನ್ನೊಂದಿಗೆ ತಾವೂ ಸ್ತಬ್ಧರಾದರೆಂದೆನಿಸಿತ್ತು ಆಗ

ನಿನ್ನ ಮೋಹದ ಕಡಲಲ್ಲಿ ಮುಳುಗುತ್ತ, ಏಳುತ್ತ
ನಿನ್ನ ಕೈ ಸ್ಪರ್ಶದ ಸುಖವ ಸವಿಯುತ್ತ
ಉದ್ವೇಗದಿ ಬಡಿವ ಎದೆಯ ತಡೆಯುತ್ತ
ನಿನ್ನೊಲವಿನ ಮಧುವಲ್ಲಿ ಮೀಯುತ್ತ
ಇತ್ತ ನಿನ್ನ ಕೈ ಬಿಡದೆ, ಅತ್ತ ಬಿದ್ದು ನಿನ್ನ ಮೈಗಂಟಿದೆ,
ಸಿಕ್ಕ ಒಲವ ಸವಿಯ್ತ್ತ , ದಕ್ಕ ಕ್ಷಣವ ನೆನೆಯುತ್ತ
ಸಂಯಮದಲ್ಲಿ ನಿನ್ನ ಜೊತೆ ನಡೆಯುತ್ತ ಬರತೊಡಗಿದೆ ನಾನಾಗ.


Summary:

It was a cool summer night, I walked with you, the moonlight, breeze made it cooler. Your outstretched hand, when asked for mine in sign, and our fingers weaved and clasped, and soon there was warmth and heat between us.

My mind scared, suggested me to slowly undo the clasp step back and enjoy looking at you, and body pushed to grasp the holding hand and lean on for the romance going to be.

Not letting go, nor pulling close , I tried my best to hold the composure, yet experience the sweet indulgent and walk along still holding your hand, with gratitude for the moments I got.






Poetry by Bunny
Read 95 times
Written on 2024-10-18 at 20:36

Tags Romantic 

dott Save as a bookmark (requires login)
dott Write a comment (requires login)
dott Send as email (requires login)
dott Print text


Alan J Ripley The PoetBay support member heart!
This poem was well worth translation
Nicely written, thanks for sharing.
Regards Alan
2025-01-22